If you are an avid Reader, Click Here to Sign in. Create bookmarks, post comments, engage in discussion with authors and other readers, increase your knowledge, proficiency in language, earn points and compare and share with others.

ಜನನದ ಮುನ್ನ, ಸಾವಿನ ನಂತರ, 

ಎನಿದೆಯೋ ನಾನರಿಯೆ; 

ಜನನದ ನಂತರ, ಸಾವಿನ ಮುನ್ನ, 

ನಡೆವುದೆಲ್ಲಾ ನಾನರಿತೇ. 

ಕನಸಿನ ಕಾವ್ಯಗಳಂತೇ, 

ನನಸಿನ ನವ್ಯಗಳು; 

ಕಣ್ಣ ರೆಪ್ಪೆಗಳ ಮುಂದೆ ನಿಂತಾಗ, 

ಎಲ್ಲವೂ ಮೊದಲ ಮಳೆಯ ಪ್ರಥಮ ಹನಿಗಳು. 

 

ಕಲ್ಮಷರಹಿತ ಅಭಿಪ್ರಾಯಗಳ ಸಹಿತ, 

ನಾನೆಂದೆಂದಿಗೂ ಮಗುವಾಗಿರಬೇಕು; 

ಈ ನನ್ನ ಪುಟ್ಟ ಮನದೊಳು,

ಪ್ರತಿ ನೆನಪೂ ನಗುವಾಗಿರಬೇಕು. 

 

ಮನವೊಲಿಸುವ ಒಂದು ನಗುವಿಗಾಗಿ, 

ಮನತಣಿಸುವ ನೆನಪುಗಳ ಆಹ್ವಾನ; 

ಅನಿವಾರ್ಯವಲ್ಲವಾದರೂ, ಮನಸಿಗೆ ಅದರದೇ ದ್ಯಾನ. 

ನೆನಪುಗಳ ಅಲೆಗಳಲ್ಲಿ, 

ನನ್ನ ನೆನಪುಗಳದ್ದೊಂದು ಸಾಲು; 

ನಾ ನಡೆದ ಹಾದಿಯಲ್ಲಿ, 

ನಾನಿಟ್ಟ ಹೆಜ್ಜೆ ಗುರುತಿನ ಕಾವಲು. 

 

ಹಾದುಹೊದ ದಾರಿಯಲ್ಲಿ, 

ಮೊಳಕೆಯೊಡೆದಿರಲು ನೆನಪುಗಳ ಕಾಳು; 

ನಾನರಿತೆ ಜೀವನವ, ಈ ಜೀವನದಲ್ಲಿ,

ಜೊತೆಗಿರಲು ಅನುಭವಗಳ ಹೊನಲು. 

 

ಸಾಮಾನ್ಯ ಬದುಕಿನ ಹಲವು, 

ಅನನ್ಯ ಪ್ರಸಂಗಗಳ ಅನಾನುಭವಿತ ಸುಳಿ; 

ಅದರ ಮಧ್ಯೆ ಸಿಲುಕಿರಲು, 

ಎನೂ ಮಾಡಲು ತೋಚದ ಅಂತರಾಳದ ನುಡಿ. 

 

ಅವರಿವರ ಅನುಭವ ಅಭಿಪ್ರಾಯಗಳ ತಿಳಿದು, 

ಮುಂದೇನೆಂದು ಮನ ಯೋಚಿಸುತಿರಲು; 

ಮನದೊಳು ಮಿಶ್ರ ಭಾವನೆಗಳ ಸಾವಿರ ಊಹೆಗಳು, 

ಮನ ನುಡಿದಂತೆ ನಾ ನಡೆದಿರಲು. 

 

ಬದುಕಿನ ಪ್ರತಿ ಮೊದಲುಗಳಲ್ಲೂ, 

ಹೊಸತೇನೋ ಕಲಿತಿರುವೆನೆಂಬ ಸಂತಸ; 

ಕಲಿತವೆಲ್ಲಾ ಎನ್ನ ಅನುಭವದ ನೆನಪುಗಳು, 

ಆ ಮೊದಲುಗಳ ಕೊನೆ ನೋಡಿದ ನಂತರ.




Author

Ranjitha Hegde R
Last Online: Monday 13/08/18 | Published on: Wednesday 08/08/18

Ranjitha Hegde R is the author of this content.

Share this page and spread the word!

Liked the Article? Review it here:

1       2       3       4       5      

Reader Reviews and Feedback:

1. Anonymous (Rated 5/5) : ""
2. Nice (Rated 5/5) : ""





Size:      || Mode:               || PlayStyle:            || Play: