If you are an avid Reader, Click Here to Sign in. Create bookmarks, post comments, engage in discussion with authors and other readers, increase your knowledge, proficiency in language, earn points and compare and share with others.

ವರ್ಣನೆಯ ವರ್ಣಮಾಲೆಯಲ್ಲಿ, 

ನನಗೊಂದು ಪದ ಹೆಣೆಯಬೇಕೆಂದು ಹುಡುಕುತಿರಲು; 

ವರ್ಣಮಾಲೆಯೇ ಕ್ಷುಲ್ಲಕವೆನಿಸಿತು, 

ನನ್ನನಿಸಿಕೆಯ ನನ್ನ ಬಿಂಬವ ಮನದೊಳು ಚಿತ್ರಿಸುತಿರಲು. 

 

ನನ್ನೊಳವಿತಿರುವ ನನ್ನ ಅನ್ವೇಷಣೆಯ ಹಾದಿಯಲಿ, 

ನಾನಪ್ಪಿಕೊಳ್ಳುವ ಪ್ರತಿ ನವೀನತೆಯ ಸ್ಥಿತಿ, 

ನಾ ಕಂಡ ಆ ನಾನು, ಎಷ್ಟು ಸುತ್ತಿದರೂ... 

ತೀರ ಕಾಣದ ಆ ಸಾಗರದ ರೀತಿ. 

 

ಕಳೆದಂತೆ ದಿನ, 

ನಾ ಕಳೆದು ಹೋಗಲು ಪ್ರತಿ ಕ್ಷಣ, 

ನನ್ನ ಅನಿಸಿಕೆಗಳನ್ನಾವರಿಸಲು,

ನನ್ನದೇ ಅನಿಸಿಕೆ-ಅಭಿಪ್ರಾಯಗಳ ಗೂಡು, 

 

ಅಂದೆಂದೋ ನಾನಂದುಕೊಂಡದ್ದು, 

ಇಂದು ಹಾಗೇ ಉಳಿದಿಲ್ಲವೆನಿಸಲು, 

ಎಲ್ಲವೂ ಅಶಾಶ್ವತವೆನಿಸುವುದು. 

 

ಗೆಜ್ಜೆಯ ಸದ್ದಿನ ಸಂದಿಯಲ್ಲೂ, 

ಸೂಕ್ಷ್ಮವಾಗಿ ಹೆಜ್ಜೆ ಇಟ್ಟಂತೆ... 

ತತ್ವಗಳ ಪರಿಕಲ್ಪನೆಯಲ್ಲಿ, 

ಈ ಯುಗವ ಕಳೆಯುವುದು.




Author

Ranjitha Hegde R
Last Online: Monday 13/08/18 | Published on: Thursday 02/08/18

Ranjitha Hegde R is the author of this content.

Share this page and spread the word!

Liked the Article? Review it here:

1       2       3       4       5      

Reader Reviews and Feedback:

1. Rakesh (Rated 5/5) : ""





Size:      || Mode:               || PlayStyle:            || Play: